About Us

ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲೂಕಿನ ಬೆಲ್ಲದ-ಬಾಗೇವಾಡಿ ಗ್ರಾಮವು ಸಹಕಾರಿ ಕ್ಷೇತ್ರದಲ್ಲಿ ಮೊದಲಿನಿಂದಲೂ ಹೆಸರುವಾಸಿಯಾಗಿದೆ. 1905ರಲ್ಲಿ ಅಂದರೆ ಸಹಕಾರಿ ಕಾಯ್ದೆ ಜಾರಿಯಲ್ಲಿ ಬಂದ ಹೊಸದರಲ್ಲಿಯೇ ಬೆಲ್ಲದ-ಬಾಗೇವಾಡಿ ಗ್ರಾಮದಲ್ಲಿ ಒಕ್ಕಲುತನ ಪತ್ತಿನ ಸಹಕಾರಿ ಸಂಘ ಸ್ಥಾಪನೆಯಾಯಿತು. ಇದು ಬೆಳಗಾವಿ ಜಿಲ್ಲೆಯಲ್ಲಿ ಪ್ರಥಮ ಸಹಕಾರಿ ಸಂಘ. ಬೆಳಗಾವಿ ಜಿಲ್ಲೆಯ ಸಹಕಾರಿ ಆಂದೋಲನದ ಇತಿಹಾಸವನ್ನು ಬರೆಯುವಾಗ ನಮ್ಮ ಗ್ರಾಮದ ಹೆಸರಿನಿಂದಲೇ ಶ್ರೀಕಾರ ಹಾಕಬೇಕಾಗುತ್ತದೆ ಎಂಬ ಸಂಗತಿಯನ್ನು ಸ್ಮರಿಸಿದಾಗ ನಮಗೆ ಹೆಮ್ಮೆ ಎನಿಸುತ್ತದೆ. ಆಗಿನ ಮುಂಬಯಿ ಪ್ರಾಂತದ ಡೆಪ್ಯೂಟಿ ಸ್ಪೀಕರ ಆಗಿದ್ದ ದಿ. ಎಸ್.ಎಸ್. ಅಂಗಡಿಯವರ ಅಧ್ಯಕ್ಷತೆಯಲ್ಲಿ 1944ರಲ್ಲಿ ಗ್ರಾಮದ ವ್ಯಾಪಾರಿ ವರ್ಗವು ಸಭೆ ಸೇರಿ ಗ್ರಾಮದಲ್ಲಿ ಒಂದು ಬ್ಯಾಂಕು ಸ್ಥಾಪನೆ ಮಾಡುವ ಬಗ್ಗೆ ನಿರ್ಣಯ ಕೈಕೊಂಡಿತು. ಕೇವಲ ರೂ. 20,000 ಶೇಅರ ಬಂಡವಾಳದೊಂದಿಗೆ ದಿನಾಂಕ 25.11.1944 ರಲ್ಲಿ ಬ್ಯಾಂಕು ಸ್ಥಾಪನೆ ಗೊಂಡಿತು. ಬ್ಯಾಂಕು ಸ್ಥಾಪನೆಯಾದ ಪ್ರಾರಂಭದ ವರ್ಷದಲ್ಲಿ ಸದಸ್ಯತ್ವವು ತೀರಾ ಕಡಿಮೆಯಿದ್ದು ಬೆಲ್ಲದ-ಬಾಗೇವಾಡಿ ಗ್ರಾಮಕ್ಕಷ್ಟೇ ಸೀಮಿತವಾಗಿತ್ತು. ಈಗ ಇಡೀ ಬೆಳಗಾವಿ ಜಿಲ್ಲೆ ಬ್ಯಾಂಕಿನ ಕಾರ್ಯ ವ್ಯಾಪ್ತಿಯಾಗಿದ್ದು ಒಟ್ಟು 13,021 ಜನ ಸದಸ್ಯರಿದ್ದಾರೆ. ದುರ್ಬಲ ವರ್ಗ, ಹರಿಜನ ಗಿರಿಜನ, ಹಾಗೂ ಮಹಿಳಾ ವರ್ಗದವರಿಗೂ ಸದಸ್ಯತ್ವ ನೀಡಲಾಗಿದೆ. ಬ್ಯಾಂಕಿನ ಕಾರ್ಯವ್ಯಾಪ್ತಿ ಹೆಚ್ಚಿದರಿಂದ ಸುತ್ತಲಿನ ಗ್ರಾಮ / ಪಟ್ಟಣಗಳಲ್ಲಿ ಬ್ಯಾಂಕಿನ ಶಾಖೆಗಳನ್ನು ಪ್ರಾರಂಭಿಸಲಾಯಿತು. ಬೆಲ್ಲದ-ಬಾಗೇವಾಡಿಯಲ್ಲಿ ಆಡಳಿತ ಕಚೇರಿ ಇದ್ದು, ಬೆಲ್ಲದ-ಬಾಗೇವಾಡಿ (ಮುಖ್ಯ ಶಾಖೆ), ಕಬ್ಬೂರ, ಧುಪಧಾಳ, ಸಂಕೇಶ್ವರ, ಕೊಣ್ಣೂರ, ಶಿಂಧಿಕುರಬೇಟ, ಕಲ್ಲೋಳಿ, ಯಮಕನಮರಡಿ ಹೀಗೆ ಬ್ಯಾಂಕು ಎಂಟು ಶಾಖೆಗಳನ್ನು ಹೊಂದಿದೆ. ಎಲ್ಲ ಶಾಖೆಗಳು ಲಾಭದಲ್ಲಿ ಕೆಲಸ ನಿರ್ವಹಿಸುತ್ತಿವೆ. ಬ್ಯಾಂಕಿನ ಆಡಳಿತ ಕಚೇರಿ ಹಾಗೂ ಶಾಖೆಗಳು ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಗ್ರಾಮೀಣ ಪ್ರದೇಶದಲ್ಲಿರುವ ಸಹಕಾರಿ ಬ್ಯಾಂಕುಗಳಲ್ಲಿ ಕರ್ನಾಟಕದಲ್ಲಿಯೇ ನಮ್ಮ ಬ್ಯಾಂಕು ಅಗ್ರಸ್ಥಾನ ಪಡೆದಿದೆ. ಬ್ಯಾಂಕಿನ ಆಡಳಿತ ಕಚೇರಿ, ಬೆಲ್ಲದ-ಬಾಗೇವಾಡಿ (ಮುಖ್ಯ ಶಾಖೆ), ಕಬ್ಬೂರ, ಧುಪಧಾಳ, ಸಂಕೇಶ್ವರ, ಕೊಣ್ಣೂರ, ಶಿಂಧಿಕುರಬೇಟ, ಕಲ್ಲೋಳಿ, ಯಮಕನಮರಡಿ ಶಾಖೆಗಳಿಗೆ ಸುಸಜ್ಜಿತವಾದ ಸ್ವಂತ ಕಟ್ಟಡಗಳನ್ನು ಕಟ್ಟಿಸಲಾಗಿದೆ. ಬ್ಯಾಂಕಿನ ಎಲ್ಲ ಶಾಖೆಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿದ್ದು, ಸಾರ್ವಜನಿಕರಿಗೆ ಅನೂಕೂಲವಾಗುವಂತೆ ಬೆಲ್ಲದ-ಬಾಗೇವಾಡಿಯಲ್ಲಿ ದಿ. ವಿಶ್ವನಾಥ ಕತ್ತಿ ಸ್ಮಾರಕ ಸಭಾ ಭವನ ಕಟ್ಟಿಸಲಾಗಿದೆ. ಬ್ಯಾಂಕಿನ ಸ್ಥಾಪನೆಯಿಂದಲೂ ನಿರ್ದೇಶಕ ಮಂಡಳಿಗೆ ಅವಿರೋಧ ಆಯ್ಕೆ : ಬ್ಯಾಂಕಿನ ಸ್ಥಾಪನೆಯಿಂದಲೂ ನಿರ್ದೇಶಕ ಮಂಡಳಿಗೆ ಅವಿರೋಧ ಆಯ್ಕೆ ಆಗುತ್ತಿರುವುದು ಬ್ಯಾಂಕಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಸಂಗತಿಯಾಗಿದೆ. ಇದು ಸದಸ್ಯರು ಬ್ಯಾಂಕಿನ ಮೇಲೆ ಇಟ್ಟ ವಿಶ್ವಾಸದ ದ್ಯೋತಕವಾಗಿದೆ. ಸಮಾಜ ಸೇವೆ : ಪ್ರತಿ ವರ್ಷ ನಿವ್ವಳ ಲಾಭದಲ್ಲಿ ಧರ್ಮಾರ್ಥ ನಿಧಿ ತೆಗೆದಿರಿಸುತ್ತಿದ್ದು ಆರೋಗ್ಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ದೇಣಿಗೆ ನೀಡಲಾಗುತ್ತಿದೆ. ಕಾರ್ಯಕ್ಷೇತ್ರದಲ್ಲಿ ಬರುವ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗುವಂತೆ ಶಾಲಾ ಕೋಣೆಗಳನ್ನು ನಿರ್ಮಿಸುವುದು. ಫರ್ನೀಚರ ಮುಂತಾದವುಗಳನ್ನು ಪೂರೈಸುತ್ತಾ ಗ್ರಾಮೀಣ ಭಾಗದಲ್ಲಿ ಬಡಮಕ್ಕಳ ಅನುಕೂಲತೆಗಳನ್ನು ಪೂರೈಸಲಾಗುತ್ತಿದೆ. ರಾಜ್ಯದಲ್ಲಿಯೇ ಒಂದು ಅನುಪಮ ಮಾದರಿಯ ಶಾಲೆಯೆಂದು ಹೆಸರುವಾಸಿಯಾಗಿರುವ ಬೆಳಗಾವಿ ಜಿಲ್ಲೆಯ ಚಂದರಗಿ ವಸತಿ ಶಾಲೆಗೆ ರೂ.1,00,000/- ದೇಣಿಗೆ ನೀಡಿ ಕ್ರೀಢಾಭಿಮಾನವನ್ನು ಮೆರೆದಿದೆ. ಸಹಕಾರಿ ಕ್ಷೇತ್ರದಲ್ಲಿ ಒಳ್ಳೆಯ ಸೇವೆ ಸಲ್ಲಿಸುತ್ತಿರುವ ಘಟಪ್ರಭಾ ಆಸ್ಪತ್ರೆಗೆ ದೇಣಿಗೆ ನೀಡುವುದರೊಂದಿಗೆ ಆರೋಗ್ಯ ಕ್ಷೇತ್ರಕ್ಕೂ ಸಹಾಯ ಸಲ್ಲಿಸಿದೆ. ದೇಶ ರಕ್ಷಣೆಯಲ್ಲಿ ಸೇವೆ ಸಲ್ಲಿಸುತ್ತ ಕಾರ್ಗಿಲ್ ಯುದ್ದದಲ್ಲಿ ಮರಣ ಹೊಂದಿದ ಜವಾನರ ಕುಟುಂಬಗಳಿಗೆ ಧನ ಸಹಾಯ ನೀಡಲಾಗಿದೆ. ನೆರೆ ಹಾವಳಿ ಮುಂತಾದ ಕಷ್ಟಕರ ಸಮಯದಲ್ಲಿ ಸರಕಾರದ ಮನವಿ ಮೇರೆಗೆ ಕಾಲಕಾಲಕ್ಕೆ ಉದಾರ ದೇಣಿಗೆಗಳನ್ನು ಸಲ್ಲಿಸಲಾಗಿದೆ. ಅಂಗವಿಕಲರ ಮೂರು ಗಾಲಿಗಳುಳ್ಳ ಸೈಕಲ್ ವಿತರಿಸಲಾಗಿದೆ. ಬಡವರಿಗೆ, ಹಿಂದುಳಿದವರಿಗೆ ಹಾಗೂ ದಲಿತರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರಗಳನ್ನು ಏರ್ಪಡಿಸುವ ಪರಿಪಾಠ ಇಟ್ಟುಕೊಳ್ಳಲಾಗಿದೆ. “ಅತ್ಯುತ್ತಮ ಸೌಹಾರ್ದ ಸಹಕಾರಿ ” ಪ್ರಶಸ್ತಿ ಬ್ಯಾಂಕು ಒಳ್ಳೆಯ ರೀತಿಯಿಂದ ಕಾರ್ಯ ನಿರ್ವಹಿಸುತ್ತ ಅಗ್ರಗಣ್ಯ ಬ್ಯಾಂಕೆಂದು ಹೆಸರು ಪಡೆದಿದೆ. 27 ಸಪ್ಟೆಂಬರ್ 2005 ರಂದು ಕೂಡಲ ಸಂಗಮದಲ್ಲಿ ಜರುಗಿದ ಸ್ವಾಭಿಮಾನಿ ಸಮಾವೇಶ ದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಬೆಂಗಳೂರು ಇವರು ನಮ್ಮ ಬ್ಯಾಂಕಿಗೆ “ಅತ್ಯುತ್ತಮ ಸೌಹಾರ್ದ ಸಹಕಾರಿ 2005” ಪ್ರಶಸ್ತಿಯನ್ನು ಮತ್ತು 2013 ರಲ್ಲಿಯೂ ಸಹ “ಉತ್ತಮ ಸೌಹಾರ್ದ ಸಹಕಾರಿ ಬ್ಯಾಂಕ” ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ. ಸದಸ್ಯರಿಗೆ ಮರಣೋತ್ತರ ಆರ್ಥಿಕ ಸಹಾಯ : ಪ್ರತಿ ವರ್ಷ ನಿವ್ವಳ ಲಾಭದಲ್ಲಿ ಸದಸ್ಯರ ಸೌಕರ್ಯ ನಿಧಿ ತೆಗೆದಿರಿಸಲಾಗುತ್ತಿದ್ದು, ಸದಸ್ಯರ ಸದಸ್ಯತ್ವದ ಅವಧಿ ಪರಿಗಣಿಸಿ ಸದರೀ ನಿಧಿಯಿಂದ ಪ್ರತಿ ಸದಸ್ಯರಿಗೆ ಗರಿಷ್ಟ ರೂ. 10,000/- ವರೆಗೆ ಮರಣೋತ್ತರ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಸಿಬ್ಬಂದಿ ಸೌಕರ್ಯಗಳು : ಪ್ರತಿ ವರ್ಷ ನಿವ್ವಳ ಲಾಭದಲ್ಲಿ ಸಿಬ್ಬಂದಿ ಸೌಕರ್ಯ ನಿಧಿ ತೆಗೆದಿರಿಸಲಾಗುತ್ತಿದ್ದು, ಸದರೀ ನಿಧಿಯಿಂದ ಸಿಬ್ಬಂದಿಗೆ ಈ ಕೆಳಗಿನ ಸೌಕರ್ಯಗಳನ್ನು ನೀಡಲಾಗುತ್ತಿದೆ. 1. ಸೇವೆಯಲ್ಲಿರುವಾಗಲೇ ಸಿಬ್ಬಂದಿ ಮರಣಹೊಂದಿದಲ್ಲಿ ಅವರ ವಾರಸುದಾರರಿಗೆ ಹಾಗೂ ಅನಾರೋಗ್ಯ ಕಾರಣ ಸ್ವ ಇಚ್ಚೆಯಿಂದ ನಿವೃತ್ತಿ ಹೊಂದಿದಲ್ಲಿ ರೂ. 25,000-00 ಧನ ಸಹಾಯ. 2. ಸೇವೆಯಲ್ಲಿರುವಾಗ ಸಿಬ್ಬಂದಿಗೆ ಶಸ್ತ್ರ ಚಿಕಿತ್ಸೆಗಾಗಿ ಗರಿಷ್ಟ ರೂ. 2 ಲಕ್ಷವರೆಗೆ ಧನ ಸಹಾಯ. 3. ಸಿಬ್ಬಂದಿ ವಾಸಕ್ಕಾಗಿ ಮನೆ ಕಟ್ಟಲು ರೂ. 8 ಲಕ್ಷ ವರೆಗೆ ಪ್ರತಿ ಶತ 3 ಬಡ್ಡಿ ದರದಿಂದ ಸಾಲ ನೀಡಲಾಗುತ್ತಿದೆ. ಮಹೋತ್ಸವಗಳ ಆಚರಣೆ : ಬ್ಯಾಂಕಿನ ಅತ್ಯುನ್ನತ ಸೇವೆಯ ಸ್ಮರಣೆಗಾಗಿ 1971 ರಲ್ಲಿ ರಜತ ಮಹೋತ್ಸವವನ್ನು ಹಾಗೂ 2005 ರಲ್ಲಿ ವಜ್ರ ಮಹೊತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಗಿದೆ. ಮಾರ್ಗದರ್ಶನ : ಕರ್ನಾಟಕ ಸರಕಾರದ ಮಾಜಿ ಸಚಿವರು ಹಾಗೂ ನಮ್ಮ ಭಾಗದ ಹಾಲಿ ಜನಪ್ರೀಯ ಶಾಸಕರಾದ ಮಾನ್ಯ ಶ್ರೀ ಉಮೇಶ ವಿ. ಕತ್ತಿ ಹಾಗೂ ಮಾಜಿ ಸಂಸದರು ಮತ್ತು ಬಿ.ಡಿ.ಸಿ.ಸಿ ಬ್ಯಾಂಕ ಬೆಳಗಾವಿ ಅಧ್ಯಕ್ಷರಾದ ಶ್ರೀ ರಮೇಶ ವಿ. ಕತ್ತಿ ಇವರ ಮಾರ್ಗದರ್ಶನದಲ್ಲಿ ಬ್ಯಾಂಕು ಪ್ರಗತಿ ಪಥದಲ್ಲಿ ಮುನ್ನಡೆದಿದೆ.

BELLAD BAGEWADI URBAN SOUHARDA SAHAKARI BANK NYT., BELLAD BAGEWADI


Board of Directors List

SL No. Name of Directors Designation
1. Shri. Kush R. Katti Chairman
2. Shri. Ramesh B. Munnoli Vice Chairman
3. Shri. Mallikarjun S. Bellad Director
4. Shri. Rajaram T. Shiralkar Director
5. Shri. Siddappa V. Hagaragi Director
6. Shri. Mohan S. Munnoli Director
7. Shri. Suresh B. Bellad Director
8. Shri. Mahaveer P. Khemalapure Director
9. Shri. Shivagouda S. Patil Director
10. Shri. Muragesh B. Katti Director
11. Smt. Vijayalaxmi S. Shetti Director
12. Smt. Sanjeevini S. Teradal Director
13. Shri. Kishor S. Katti Director
14. Shri. Shamasuddin D. Pathan Director
15. Shri. Manohar N. Shrikhande Director
16. Shri. Vinayak S. Burji Director
17. Shri. Laxman S. Karigar Prof. Director
18. Kumari. Aafreen K. Ammanagi Prof. Director